ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುವ ಅಪರೂಪದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನಗಣಿ ಹೊರವಲಯದಲ್ಲಿ ಬರುವ ಪಾಮನಕಲ್ಲೂರು ಕ್ರಾಸ್ ಬಳಿ ಇನ್ನೊವಾ ವಾಹನದಲ್ಲಿ ನಾಗರ ಹಾವು ಪತ್ತೆಯಾಗಿತ್ತು. ಕಾರಿನಿಂದ ನಾಗರಹಾವನ್ನು ಹೊರ ತೆಗೆಯಲು ಸಾಕಷ್ಟು ಪ್ರಯತ್ನಪಡಲಾಯಿತು. ಬಳಿಕ ಹಟ್ಟಿ ಚಿನ್ನದಗಣಿ ಕಂಪನಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ, ಅರವಳಿಕೆ ತಜ್ಞ ಡಾ. ರವೀಂದ್ರನಾಥ್ ಅವರು ಹಾವು ಹಿಡಿಯಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ.