ಟ್ರೆಕ್ಕಿಂಗ್ಗೆ ತೆರಳಿದ್ದ ವೇಳೆ ಐವತ್ತು ಅಡಿಗೂ ಅಧಿಕ ಆಳದಲ್ಲಿ ಬಿದ್ದಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಸೌರವ ಯಾದವ್, ಗೋಕರ್ಣದ ಪ್ಯಾರಡೈಸ್ ಬೀಚ್ಗೆ ಟ್ರೆಕ್ಕಿಂಗ್ ಹೊಗಿದ್ದ. ಈ ವೇಳೆ ಆಯತಪ್ಪಿ ಕಂದಕಕ್ಕೆ ಬಿದ್ದು ಕಾಲಿಗೆ ಗಂಭೀರ ಗಾಯವಾಗಿತ್ತು. ಯುವಕ ಬಿದ್ದಿದ್ದನ್ನ ಪ್ರವಾಸಿ ಬೋಟ್ ಚಾಲಕ ಗಮನಿಸಿ, ಕರಾವಳಿ ಕಾವಲುಪಡೆಗೆ ಮಾಹಿತಿ ನೀಡಿದ್ದಾನೆ. ಕರಾವಳಿ ಕಾವಲುಪಡೆ,