ಬಳ್ಳಾರಿ: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆಯ 2 ದಿನಗಳ ಬಳಿಕ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಅಧಿಕೃತ ಪಟ್ಟಿ ಹೊರಡಿಸಿದ್ದಾರೆ. ಆದರೆ ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಆನಂದ ಸಿಂಗ್ ಅವರಿಗೆ ಭೂವಿಜ್ಞಾನ ಮತ್ತು ಪರಿಸರ, ಪ್ರವಾಸೋದ್ಯಮ ಖಾತೆ ನೀಡಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ನಿರೀಕ್ಷೆ ಮಾಡಿದ ಖಾತೆಯನ್ನು ಮುಖ್ಯಮಂತ್ರಿಗಳು ಕೊಟ್ಟಿಲ್ಲ, ನನಗೆ ಇದರ ಬಗ್ಗೆ ನೋವಿದೆ. ನಾಳೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಮತ್ತೆ ಬೇಡಿಕೆ