ಶಾಸಕರು ಅವರನ್ನು ಭೇಟಿಯಾಗಲು ಬರುತ್ತಿದ್ದಾರೆಂದು ತನಗೆ ತಿಳಿದಿಲ್ಲವೆಂದು ಹೇಳಿಕೊಂಡ ಸ್ಪೀಕರ್, ನೀವು ಮೈಸೂರು ಮಹಾರಾಣಿಯನ್ನು ಮದುವೆಯಾಗಲು ಬಯಸಬಹುದು, ಆದರೆ ಇದರರ್ಥ ಅವಳು ಒಪ್ಪಿಕೊಳ್ಳಬೇಕು ಎಂದರ್ಥವೇ? ಎಂದು ತಿರುಗೇಟು ನೀಡಿದ್ದಾರೆ. ಸ್ಪೀಕರ್ ಶಾಸಕರ ರಾಜೀನಾಮೆಗೆ ಸೂಕ್ತ ಕಾರಣ ಕೇಳಬಹುದು. ರಾಜೀನಾಮೆಗೆ ನಿಖರವಾದ ಕಾರಣ ಮನವರಿಕೆಯಾಗದಿದ್ದಲ್ಲಿ ರಾಜೀನಾಮೆ ತಿರಸ್ಕರಿಸಬಹುದು. ರಾಜೀನಾಮೆ ಸ್ವೀಕಾರಕ್ಕೆ ಯಾವುದೇ ಸಮಯದ ಮಿತಿಯಿಲ್ಲ. ರಾಜೀನಾಮೆಯನ್ನು ತಿರಸ್ಕರಿಸುವ ಅಧಿಕಾರ ಕೂಡಾ ಸ್ಪೀಕರ್ ಅವರಿಗಿದೆ. ಇದೇ ಬ್ರಹ್ಮಾಸ್ತ್ರವನ್ನು ಬಳಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.