ಬಾಗಲಕೋಟೆ : ಹಾಸನದಲ್ಲಿ ಪ್ರಜ್ವಲ್ ಗೆಲ್ಲಲು ಸಾಧ್ಯವಿಲ್ಲ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎ.ಮಂಜು ವಿರುದ್ಧ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಚಿವ ಎ.ಮಂಜು ಅವರು, ದೇವೇಗೌಡರಿಂದ ಮಾತ್ರ ಹಾಸನದಲ್ಲಿ ಗೆಲ್ಲೋಕೆ ಸಾಧ್ಯ, ಪ್ರಜ್ವಲ್ಗೆ ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಎ.ಮಂಜು ಅಂತವನ ಮಾತಿಗೆಲ್ಲ ನಾನು ಪ್ರತಿಕ್ರಿಯೆ ಕೊಡಲು ಆಗುತ್ತಾ? ನಾನು ಅಂತವ್ರಿಗೆಲ್ಲ ರಿಯಾಕ್ಟ್ ಮಾಡಲು