ಪಠ್ಯ ಪುಸ್ತಕ ವಿವಾದಕ್ಕೆ ಕೊನೆಯೇ ಇಲ್ಲದಂತಾಗ್ತಿದೆ, ಹೊಸ ಪರಿಷ್ಕೃತ ಪಠ್ಯವನ್ನ ಸರ್ಕಾರ ಪಬ್ಲಿಕ್ ಡೊಮೈನ್ ಗೆ ಇಟ್ಟು ತಪ್ಪುಗಳಿದ್ದರೆ ಸರಿಪಡಿಸುವುದಾಗಿ ಹೇಳಿತ್ತು. ಆದ್ರೆ ಇದೀಗ ಜನಾಭಿಪ್ರಾಯಕ್ಕೆ ಇಡೋ ಮುಂಚೆಯೇ ಶಾಲೆಗಳಿಗೆ ಪುಸ್ತಕಗಳು ರವಾನೆಯಾಗಿ ಮಕ್ಕಳಿಗೆ ತಲುಪಿವೆ, ಸರ್ಕಾರದ ಈ ದ್ವಂದ್ವ ನಿಲುವಿನ ವಿರುದ್ದ ಆಕ್ರೋಶ ಮತ್ತಷ್ಟು ಹೆಚ್ಚಾಗ್ತಿದೆ.ರೋಹಿತ್ ಚಕ್ರತೀರ್ಥ ಅವರ ಸಮಿತಿಯ ಪಠ್ಯ ಪರಿಷ್ಕರಣೆ ವಿವಾದಕ್ಕೆ ಕೊನೆಯೇ ಇಲ್ವಾ ಅನ್ನುವಂತಾಗಿದೆ. ದಿನಕ್ಕೊಂದು ಸ್ವರೂಪ ಪಡೆಯುತ್ತಿರುವ ಪರಿಷ್ಕರಣೆ ವಿವಾದ ಕಳೆದ ವಾರ ಒಂದು ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿತ್ತು. ಎಲ್ಲಾ ಸರಿಹೋಯ್ತು ಅಂದು ಕೊಂಡಿರೋ ಮಧ್ಯೆಯೇ ಮತ್ತೊಂದು ವಿವಾದ ಭುಗಿಲೆದ್ದಿದೆ, ಚಕ್ರತೀರ್ಥ ಪಠ್ಯದಲ್ಲಿ ಆಕ್ಷೇಪಾರ್ಹ ಅಂಶಗಳ ಬದಲಾವಣೆಗೆ ಪರಿಷ್ಕೃತ ಪಠ್ಯ ವನ್ನ ಸರ್ಕಾರ ಪಬ್ಲಿಕ್ ಡೊಮೈನ್ ಗೆ ಇಡಲು ನಿರ್ಧರಿಸಿತ್ತು. ಜನಾಭಿಪ್ರಾಯದಲ್ಲಿ ದೂರು ಬಂದ್ರೆ ಅದನ್ನು ಪುನರ್ ಪರಿಶೀಲಿಸುವುದಾಗಿ ಹೇಳಿದ್ದರು ಶಿಕ್ಷಣ ಸಚಿವರು. ಆದ್ರೀಗ ಜನಾಭಿಪ್ರಾಯಕ್ಕೂ ಮೊದಲೇ ಶಾಲೆಗಳಿಗೆ ಹೊಸ ಪುಸ್ತಕಗಳನ್ನ ರವಾನೆ ಮಾಡಲಾಗ್ತಿದೆ.