ಮೈಸೂರಿನ ದೇವರಾಜ ಮಾರುಕಟ್ಟೆ ನೆಲಸಮಕ್ಕೆ ಪಾರಂಪರಿಕ ಸಮಿತಿ ಒಪ್ಪಿಗೆ ವಿಚಾರ ಕುರಿತು, ಸರಿಯಾದ ತಜ್ಞರ ನೇಮಕ ಮಾಡಿ ಪರಿಶೀಲಿಸಿದ್ರೆ ಮಾರುಕಟ್ಟೆ ಪುನಶ್ಚೇತನಗೊಳಿಸಬಹುದು ಎಂದು ರಾಣಿ ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ. ಸರ್ಕಾರ ಆ ಕೆಲಸವನ್ನು ಮಾಡುತ್ತೆ ಅನ್ನೋ ಭರವಸೆ ಇದೆ. ರಾಜೇಂದ್ರ ವಿಲಾಸ ಪ್ಯಾಲೇಸ್ ಕೂಡ ಶಿಥಿಲಾವಸ್ಥೆ ತಲುಪಿತ್ತು. ಅದನ್ನ ನಾವು ಪುನಶ್ಚೇತನ ಮಾಡಿದ್ದೇವೆ. ಪ್ರಯತ್ನ ಮಾಡಿದ್ರೂ ಯಾವುದು ಆಗಲ್ಲ ಅನ್ನೋ ಹಾಗಿಲ್ಲ. ಪ್ರಯತ್ನ ಮಾಡಿದ್ರೆ ದೇವರಾಜ ಮಾರುಕಟ್ಟೆ ಉಳಿಸಿಕೊಳ್ಳಬಹುದು.