ರಿಕ್ಷಾ ಚಾಲಕರೊಬ್ಬರು ರೈಲಿನಡಿ ಬಿದ್ದು ಭೀಕರವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ರೈಲಿನಡಿಗೆ ಬಿದ್ದು ರಿಕ್ಷಾ ಚಾಲಕರೊಬ್ಬರು ಮೃತಪಟ್ಟ ಘಟನೆ ಹಾರಾಡಿ ಕರ್ಮಲ ಸಮೀಪ ನಡೆದಿದೆ. ಮೂಲತಃ ಕಡಬ ತಾಲೂಕಿನ ಏನೆಕಲ್ಲು ಕಲ್ಲಾಜೆ ದಿ. ವಾಮನ ಗೌಡರ ಪುತ್ರ ರಿಕ್ಷಾ ಚಾಲಕ ನಾರಾಯಣ ಯಾನೆ ನಿತ್ಯ(48) ಮೃತಪಟ್ಟವರು. ಪುತ್ತೂರಿನ ಹಾರಾಡಿಯ ನಂದಿಲ ಎಂಬಲ್ಲಿ ಕಳೆದ 7 ವರ್ಷಗಳಿಂದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಫೆ. 3ರಂದು ಬೆಳಿಗ್ಗೆ ರಿಕ್ಷಾದಲ್ಲಿ ಹೋದ ಅವರು