ಕೋವಿಡ್ -19 ನಿಯಂತ್ರಣಕ್ಕಾಗಿ ಮುಂದಾಗಿರುವ ವೇಳೆ ಕೊರೊನಾ ವಾರಿಯರ್ಸ್, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪಾದರಾಯನಪುರದಲ್ಲಿ ಮತ್ತೆ ಗಲಾಟೆಗಳ ಸದ್ದು ಕೇಳಿಬರುತ್ತಿದೆ. ಘಟನೆ ಸಂಬಂಧ 5 ಕೇಸ್ ಗಳನ್ನು ದಾಖಲು ಮಾಡಿಕೊಂಡಿರುವ ಸರಕಾರ ಐವತ್ತಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧನ ಮಾಡಿ, ಕಟ್ಟೆಚ್ಚರಕ್ಕೆ ಸೂಚನೆ ಕೊಟ್ಟಿದೆ.ಆದರೆ ಪಾದರಾಯನಪುರದ ನಿವಾಸಿಗಳು ಕೆಲವರು ಕುಂಟು ನೆಪಗಳನ್ನು ಮಾಡುತ್ತಾ ಬೈಕ್ ಗಳಲ್ಲಿ ಎರಡ್ಮೂರು ಜನರು ಸಂಚಾರಕ್ಕೆ ಮುಂದಾಗುತ್ತಿದ್ದಾರೆ.ಕೆಲವರು ಪೊಲೀಸರೊಂದಿಗೆ ತೀವ್ರ ವಾಗ್ವದ ನಡೆಸಿದ್ದಾರೆ. ವ್ಯಕ್ತಿಯೊಬ್ಬ