ಬೆಂಗಳೂರು: ಕಣ್ಣಾಮುಚ್ಚಾಲೆ ಆಟವಾಡುವ ನೆಪದಲ್ಲಿ ಬಾಲಕನ ಕುತ್ತಿಗೆಯಲ್ಲಿ ಚಿನ್ನದ ಸರ ಕಳ್ಳತನ ಮಾಡಿದ ಘಟನೆ ನಡೆದಿದೆ. ಉದ್ಯಮಿಯೊಬ್ಬರ 6 ವರ್ಷದ ಪುತ್ರನ ಕುತ್ತಿಗೆಯಲ್ಲಿ ಮೂರೂವರೆ ಲಕ್ಷ ಮೌಲ್ಯದ ಸರ ಕಳ್ಳತನವಾಗಿದೆ. ಮದುವೆಗೆಂದು ಹೋಗಿದ್ದಾಗ ಮಗು ಇನ್ನಿಬ್ಬರು ಮಕ್ಕಳೊಂದಿಗೆ ಹೊರಗಡೆ ಆಟವಾಡುತ್ತಿದ್ದ. ಈ ವೇಳೆ ಯಾರೋ ಖದೀಮರು ಸರ ಎಗರಿಸಿದ್ದಾರೆ.ಸರ ಕಳ್ಳತನಾದ ಬಗ್ಗೆ ಮಗು ಅಳುತ್ತಾ ಬಂದು ಪೋಷಕರಿಗೆ ತಿಳಿಸಿದ್ದಾನೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು