Widgets Magazine

ವೃಷಭಾವತಿ ನದಿ ಉಳಿವಿನ ಹೋರಾಟಕ್ಕೆ ರಾಕಿಂಗ್ ಸ್ಟಾರ್ ಯಶ್ ಸಾಥ್

ಬೆಂಗಳೂರು| Krishnaveni K| Last Modified ಶುಕ್ರವಾರ, 20 ಸೆಪ್ಟಂಬರ್ 2019 (10:35 IST)
ಬೆಂಗಳೂರು: ವೃಷಭಾವತಿ ನದಿ ಉಳಿಸಿ ಹೋರಾಟಕ್ಕೆ ಹೆಚ್ಚಿನ ಬಲ ತುಂಬಲು ಯುವ ಬ್ರಿಗೇಡ್ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಮ್ಯಾರಥಾನ್ ಗೆ ರಾಕಿಂಗ್ ಸ್ಟಾರ್ ಯಶ್ ಸಾಥ್ ನೀಡಿದ್ದಾರೆ.

 
ವೃಷಭಾವತಿ ನದಿಯನ್ನು ಹಾಳು ಮಾಡಿದವರು ಯಾರು ಎಂಬ ಬಗ್ಗೆ ದೂರುತ್ತಾ ಕೂರುವ ಬದಲು ನಮ್ಮ ರಾಜಧಾನಿಯ ನಡುವೆ ಹರಿಯುತ್ತಿರುವ ನದಿ ಉಳಿವಿನ ಹೋರಾಟಕ್ಕೆ ನಾವೆಲ್ಲಾ ಕೈಜೋಡಿಸಬೇಕಿದೆ. ಹೀಗಾಗಿ ಮ್ಯಾರಥಾನ್ ನಲ್ಲಿ ಭಾಗವಹಿಸಿ ನಿಮ್ಮ ಬೆಂಬಲ ನೀಡಿ ಎಂದು ಯಶ್ ಕರೆಕೊಟ್ಟಿದ್ದಾರೆ.
 
ಹೆಚ್ಚಿನ ಜನರು ಕೆಂಗೇರಿ ಮೋರಿ ಎಂದುಕೊಂಡಿದ್ದಾರೆ. ಆದರೆ ಇದು ವೃಷಭಾವತಿ ನದಿ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಮಹಾನಗರವೊಂದರಲ್ಲಿ ನದಿಯೊಂದು ಹರಿಯುತ್ತಿದೆ ಎಂದರೆ ಅದು ಬೆಂಗಳೂರಿನಲ್ಲಿ ಮಾತ್ರ. ಈ ಪುಣ್ಯ ನದಿಯನ್ನು ಉಳಿಸಿಕೊಳ್ಳುವ ಹೋರಾಟಕ್ಕೆ ನನ್ನ ಬೆಂಬಲ ಯಾವತ್ತೂ ಇರುತ್ತದೆ ಎಂದು ಯಶ್ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :