ಮೈಸೂರು ಬಿಟ್ಟು ತೆರಳುವಾಗ ಭಾವುಕರಾದ ರೋಹಿಣಿ ಸಿಂಧೂರಿ

ಮೈಸೂರು| Krishnaveni K| Last Modified ಮಂಗಳವಾರ, 8 ಜೂನ್ 2021 (09:22 IST)
ಮೈಸೂರು: ಪಾಲಿಕೆ ಆಯುಕ್ತೆ ಜೊತೆಗಿನ ಕಿತ್ತಾಟದ ಬಳಿಕ ವರ್ಗಾವಣೆಯಾದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ಬಿಟ್ಟು ತೆರಳುವ ಬಗ್ಗೆ ಮಾತನಾಡುವಾಗ ಭಾವುಕರಾಗಿದ್ದಾರೆ.

 
ಮೈಸೂರು ಜಿಲ್ಲಾಧಿಕಾರಿಯಾಗಿ ಜಿಲ್ಲೆಯನ್ನು ಕೊವಿಡ್ ಮುಕ್ತಗೊಳಿಸಲು ಶ್ರಮಿಸಿದ್ದೇನೆ. ಭೂ ಮಾಫಿಯಾ ಬಗ್ಗೆ ಕೆಲಸ ಮಾಡಲು ನನಗೆ ಕೆಲವರು ಅಡ್ಡಿಯಾದರು. ನನ್ನ ಪ್ರಯತ್ನ ನಾನು ಮಾಡಿದ್ದೇನೆ ಎಂದಿದ್ದಾರೆ.
 
ಇನ್ನು, ಇಷ್ಟು ದಿನ ಮೈಸೂರಿನ ಜನತೆ ನನ್ನನ್ನು ಮನೆ ಮಗಳಂತೆ ಕಂಡಿದ್ದಾರೆ. ಈಗ ತವರು ಬಿಟ್ಟು ಹೋಗುವ ಫೀಲ್ ಆಗುತ್ತಿದೆ. ಆದರೆ ಎಲ್ಲೇ ಹೋದರೂ ನನ್ನ ಕೆಲಸದ ಮೂಲಕವೇ ಉತ್ತರ ಕೊಡುತ್ತೇನೆ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :