ರೋಹಿಣಿ ಸಿಂಧೂರಿ ವರ್ಗಾವಣೆ: ಟ್ವಿಟರಿಗರ ಖಂಡನೆ

ಮೈಸೂರು| Krishnaveni K| Last Modified ಸೋಮವಾರ, 7 ಜೂನ್ 2021 (09:07 IST)
ಮೈಸೂರು: ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿರುವುದನ್ನು ಟ್ವಿಟರಿಗರು ಖಂಡಿಸಿದ್ದಾರೆ.
 

ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿಯಾಗಿದ್ದರು. ಅವರು ರಾಜಕಾರಣಗಳಿಗೆ ಬಿಸಿ ತುಪ್ಪವಾಗಿದ್ದರು. ಕೊನೆಗೂ ರಾಜಕೀಯ ನಾಯಕರ ಹುನ್ನಾರಕ್ಕೆ ರೋಹಿಣಿ ತಲೆದಂಡವಾಗಿದೆ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಮೊದಲು ಕಾಂಗ್ರೆಸ್ ಸರ್ಕಾರಕ್ಕೆ ಆಕೆಯ ಮೇಲೆ ಸಿಟ್ಟಿತ್ತು. ಜೆಡಿಎಸ್ ನವರಿಗೂ ಆಕೆಯನ್ನು ಕಂಡರಾಗುತ್ತಿರಲಿಲ್ಲ. ಈಗ ಬಿಜೆಪಿ ಸರ್ಕಾರ ಆಕೆಯನ್ನು ವರ್ಗಾವಣೆ ಮಾಡಿದೆ. ಅಂತೂ ಒಬ್ಬ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಮೂರೂ ಪಕ್ಷಗಳೂ ಶಾಮೀಲಾಗಿವೆ ಎಂದಿದ್ದಾರೆ. ಇನ್ನು, ಕೆಲವರು ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ರೋಹಿಣಿ ಸಿಂಧೂರಿಗೆ ಬದ್ಧ ಎದುರಾಳಿಯಾಗಿದ್ದ ಜೆಡಿಎಸ್ ಶಾಸಕ ಸಾ ರಾ ಮಹೇಶ್ ವಿರುದ್ಧ ಕಿಡಿ ಕಾರಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :