ಪಠ್ಯ ಪುಸ್ತಕ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ವಿವಾದ ಮುಗಿಯುವ ಲಕ್ಷಣ ಕಾಣ್ತಿಲ್ಲ. ನಗರದಾದ್ಯಂತ ಪಠ್ಯಪುಸ್ತಕ ವಿಷಯವಾಗಿ ವಕೀಲರು, ಕನ್ನಡಪರ ಸಂಘಟನೆಯ ನಾಯಕರು ಸೇರದಂತೆ ಹಲವು ಚಿಂತಕರು ಆಕ್ರೋಶ ಹೊರಹಾಕ್ತಿದ್ದಾರೆ.ಇಂದು ಬೀದಿಗಿಳಿದ್ದು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿದ್ರು. ಅಷ್ಟೇ ಅಲ್ಲದೆ ಬರಗೂರು ರಾಮಚಂದ್ರಪ್ಪನವರ ಸಮಿತಿಯ ಪಠ್ಯವನ್ನೇ ಅಳವಡಿಸಬೇಕೆಂದು ಆಗ್ರಹಿಸಿದ್ರು.ರಾಜಧಾನಿಯಲ್ಲಿ ಪಠ್ಯ ಪುಸ್ತಕ ವಿಷಯವಾಗಿ ಒಂದರ ನಂತರ ಮತ್ತೊಂದರಂತೆ ಧರಣಿ ನಡೆಯುತ್ತಿತ್ತು. ಒಂದು ಕಡೆ ಮಲೇಶ್ವರಂನ್ನ ಸಂಪಿಗೆ ರಸ್ತೆಯ ಕುವೆಂಪು ಪ್ರತಿಮೆ ಮುಂಭಾಗ ಕರವೇ ಬಣ ರೋಹಿತ್ ಚಕ್ರತೀರ್ಥನ್ನ ಪ್ರತಿಮೆಗೆ ಚಪ್ಪಲಿಯಲ್ಲಿ ಹೊಡೆಯುವ ಮೂಲಕ ಧರಣಿ ನಡೆಸಿದ್ರು. ಮತ್ತೊಂದು ಕಡೆ ಸಿಟಿ ಸಿವಿಲ್ ಕೋರ್ಟ್ ಮುಂಭಾಗ ವಕೀಲರ ಸಂಘದಿಂದ ಧರಣಿ ನಡೆಸಿದ್ರು. ಇದರ ಜೊತೆಗೆ ವಾಟಾಳ್ ನಾಗರಾಜ್ ಕೂಡ ವಿನೂತನವಾಗಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಧರಣಿ ನಡೆಸಿದ್ರು. ವಾಟಾಳ್ ನಾಗರಾಜ್ ಬೆಳ್ಳಿ ರಥದಲ್ಲಿ ಕುವೆಂಪುರವರ ಭಾವ ಚಿತ್ರವನ್ನ ಹಾಕಿಕೊಂಡು ನಾಡಗೀತೆ ಮತ್ತು ರಾಷ್ಟ್ರಗೀತೆಯನ್ನ ಹಾಕಿಕೊಂಡು ಮೆಜಸ್ಟಿಕ್ ವರೆಗೂ ವಿನೂತನವಾಗಿ ಧರಣಿ ನಡೆಸಿದ್ರು. ಇಷ್ಟೆಲ್ಲ ಆಕ್ರೋಶ ನಗರದಲ್ಲಿ ನಡೆಯುತ್ತಿದ್ರೆ ಮತ್ತೊಂದು ಕಡೆ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಂಪಾ ನಾಗರಾಜಯ್ಯ ರಾಜೀನಾಮೆ ಸಲ್ಲಿಸಿದಾರೆ.