ಅಪ್ರಾಪ್ತೆಯೊಬ್ಬಳನ್ನು ಆಸ್ತಿ ಆಸೆಗಾಗಿ ಅತ್ಯಾಚಾರ ಎಸಗಿದ್ದ ಕಾಮುಕನಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಚಿಂತಾಮಣಿ ಮೂಲದ ವೆಂಕಟೇಶ್ ಎಂಬಾತ 13 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಮಾಡಿದ್ದನು. ಬಾಲಕಿ ತಂದೆ ದೂರು ನೀಡಿದ್ದರಿಂದ ಆರೋಪಿ ವೆಂಕಟೇಶ್, ಇದಕ್ಕೆ ಸಹಕರಿಸಿದ ಮುನಿಕೃಷ್ಣ, ವೆಂಕಟೇಶಪ್ಪರನ್ನು ಬಂಧನ ಮಾಡಲಾಗಿತ್ತು. ಇದೀಗ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿ ವೆಂಕಟೇಶನಿಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.