ಕರ್ನಾಟಕ ರಾಜ್ಯದಲ್ಲಿದ್ದುಕೊಂಡು ಬೇರೆ ರಾಜ್ಯಕ್ಕೆ ಜಯಕಾರ ಹಾಕುವವರು ಅದೇ ರಾಜ್ಯಕ್ಕೆ ಹೊಗಲಿ ಎಂದು ವಾರ್ತಾ ಖಾತೆ ಸಚಿವ ರೋಷನ್ ಬೇಗ್ ಗುಡುಗಿದ್ದಾರೆ ನಾವೆಲ್ಲಾ ಭಾರತೀಯರು, ಕನ್ನಡಿಗರು ಎನ್ನುವುದನ್ನು ಬೆಳಗಾವಿ ಮಹಾನಗರ ಪಾಲಿಕೆಯ ಎಂಇಎಸ್ ಸದಸ್ಯರು ಅರಿಯಬೇಕು.ಯಾವುದೇ ಬೇಧ ಭಾವ ಸರಿಯಲ್ಲ ಎಂದು ಕಿವಿಮಾತು ಹೇಳಿದ್ದಾರೆ. ನಾಡವಿರೋಧಿ ಘೋಷಣೆ ಕೂಗುವವರಿಗೆ ಮುಂದೆ ಕಾದಿದೆ ಮಾರಿಹಬ್ಬ. ಇನ್ಮುಂದೆ ನಾಡವಿರೋಧಿ ಘೋಷಣೆಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.