ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಬರುವವರೆಗೆ ಮಾತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿಯಾ? ನಂತರ ಸಿಎಂ ಸ್ಥಾನ ಅನಂತಕುಮಾರ್ ಹೆಗಡೆಯವರ ಪಾಲಾಗಲಿದೆಯೇ ಎನ್ನುವ ಅನುಮಾನ ಬೆಳವಣಿಗಗಳು ನೋಡಿದಲ್ಲಿ ಇದೀಗ ಕಾಡಲು ಆರಂಭಿಸಿದೆ. ಕಟ್ಟರ್ ಹಿಂದುತ್ವವಾದಿ ನಾಯಕರಾದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪರಿವರ್ತನಾ ಯಾತ್ರೆಗೆ ಆಗಮಿಸುತ್ತಿರುವಂತೆಯೇ ಸಿಎಂ ಅಭ್ಯರ್ಥಿಗೆ ದೊರೆಯಬೇಕಾದ ಗೌರವ ದೊರೆತಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದಲ್ಲಿ