ರೌಡಿಶೀಟರ್ ಒಬ್ಬನನ್ನು ಭೀಕರವಾಗಿ ಸ್ನೇಹಿತರೇ ಕೊಲೆ ಮಾಡಿರುವ ಘಟನೆ ನಡೆದಿದೆ. ಹಸನ್ ಅಲಿ (25) ತನ್ನ ಗೆಳೆಯರಿಂದಲೇ ಕೊಲೆಯಾದ ರೌಡಿಶೀಟರ್ ಆಗಿದ್ದಾನೆ. ಕಲಬುರಗಿಯ ಪೀರ್ ಬೆಂಗಾಲಿ ಗ್ರೌಂಡ್ ನಲ್ಲಿ ತಡರಾತ್ರಿ ಘಟನೆ ನಡೆದಿದೆ.ಈ ಹಿಂದೆ ಕೊಲೆ ಕೇಸ್ ವೊಂದರಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರಬಂದಿದ್ದ ಹಸನ್ ಅಲಿ ಹತನಾಗಿದ್ದಾನೆ. ಹಸನ್ ಅಲಿ ಕೊಲೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.