ಬೆಂಗಳೂರು: ತನ್ನ ಪತ್ನಿ ಜೊತೆಗೆ ಸಲುಗೆಯಿಂದಿದ್ದ ಆಟೋ ಚಾಲಕನ ಕೊಲೆಗೆ ರೌಡಿ ಶೀಟರ್ ಜೈಲಿನಿಂದಲೇ ಸಂಚು ರೂಪಿಸಿದ್ದು ಇದೀಗ ಬಯಲಾಗಿದೆ.ಈ ಸಂಬಂಧ ರೌಡಿ ಶೀಟರ್ ಪೋಷಕರು, ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಜೈಲಿನಲ್ಲಿದ್ದ ರೌಡಿ ಶೀಟರ್ ತನ್ನ ಸಹಚರರಿಗೆ ಸೂಚನೆ ನೀಡಿ ಆಟೋ ಚಾಲಕನನ್ನು ಅಪಹರಿಸಿದ್ದರು. ನಂತರ ಕೊಲೆಗೈದು ಮೃತದೇಹವನ್ನು ಬಿಸಾಕಲು ಯೋಜನೆ ಹಾಕಿದ್ದರು.ಆದರೆ ಈ ಮಾಹಿತಿ ಪಡೆದ ಪೊಲೀಸರು ಗಾಯಗೊಂಡಿದ್ದ ಆಟೋ ಚಾಲಕನನ್ನು ರಕ್ಷಿಸಿದ್ದಾರೆ. ಇನ್ನು, ಈ ಕೃತ್ಯಕ್ಕೆ ಸಹಕರಿಸಿದ