ತನ್ನ ಮನೆ ಮೇಲಿನ ದಾಳಿ ಬಳಿಕ ನಾಪತ್ತೆಯಾಗಿರುವ ರೌಡಿ ಶೀಟರ್ ನಾಗ ಪೊಲೀಸರ ಕೈಯಿಂದ ಬೀಳುವ ಲಾಠಿ ಏಟು ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಬಿಪಿ, ಶುಗರ್, ಎಂಆರ್`ಐ ಸ್ಕ್ಯಾನ್ ಸೇರಿದಂತೆ ಹಲವು ಪರೀಕ್ಷೆಗಳನ್ನ ಮಾಡಿಸಿಕೊಂಡು ವೈದ್ಯಕೀಯ ವರದಿ ಪಡೆದಿರುವ ನಾಗ, ಶರಣಾಗುವುದಕ್ಕೂ ಮುನ್ನ ವಕೀಲರ ಮೂಲಕ ವೈದ್ಯಕೀಯ ವರದಿಯನ್ನ ಕೋರ್ಟ್`ಗೆ ಸಲ್ಲಿಸಿ ಪೊಲೀಸರು ಹೊಡೆಯದಂತೆ ನಿರ್ಬಂಧ ಹೇರುವ ಪ್ರಯತ್ನ ನಡೆಸಿದ್ದಾನೆ