ಮಂಡ್ಯ : ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೆಆರ್ ಪೇಟೆ ತಾಲೂಕು ಅಘಲಯ ಗ್ರಾಮದ ರೈತ ಸುರೇಶ್ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ ಸಿಎಂ ಕುಮಾರಸ್ವಾಮಿ ಆತನ ಕುಟುಂಬದವರಿಗೆ ಸಾಂತ್ವಾನ ಹೇಳಿ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿದ್ದಾರೆ. ಸಾಲಭಾದೆಯಿಂದ ರೈತ ಸುರೇಶ್ ವಿಡಿಯೋದ ಮೂಲಕ ಕೆರೆಗಳನ್ನು ತುಂಬಿಸಿ ರೈತರ ಕಷ್ಟ ಬಗೆಹರಿಸುವಂತೆ ಹಾಗೂ ತಮ್ಮ ಅಂತ್ಯ ಸಂಸ್ಕಾರಕ್ಕೆ ಬರುವಂತೆ ಸಿಎಂಗೆ ಮನವಿ ಮಾಡಿ ನೇಣಿಗೆ