ಸಚಿವ ಜಾರ್ಜ್‍‍ನಿಂದ 850 ಕೋಟಿ ಭೂಮಿ ಕಬಳಿಕೆ!

ಬೆಂಗಳೂರು, ಗುರುವಾರ, 7 ಡಿಸೆಂಬರ್ 2017 (17:18 IST)

ಬೆಂಗಳೂರು ನಗರಾಭಿವೃದ್ಧಿ ಕೆ.ಜೆ.ಜಾರ್ಜ್ ಅವರು 850 ಕೋಟಿ ಬೆಲೆಬಾಳುವ 13 ಎಕರೆ ಸರ್ಕಾರಿ ಸ್ವತ್ತು ಕಬಳಿಕೆ ಮಾಡಿರುವ ಬಗ್ಗೆ  600 ಪುಟಗಳ ದಾಖಲೆ ಬಿಡುಗಡೆ ಮಾಡಿರುವ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಲೋಕಾಯುಕ್ತ, ಎಸಿಬಿ, ಬಿಎಂಟಿಎಫ್ ಹಾಗೂ ಎಸಿಎಂಎಂ ನ್ಯಾಯಾಲಯಲ್ಲಿ ದೂರು ದಾಖಲಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಜಿಲ್ಲಾಧಿಕಾರಿ, ತಹಸೀಲ್ದಾರರು, ಆಯುಕ್ತರು, ಬಿಡಿಎ ನಗರ ಯೋಜನಾಧಿಕಾರಿ, ಬಿಬಿಎಂಪಿ ಕಂದಾಯ ಇಲಾಖೆ ಅಧಿಕಾರಿಗಳು ಕೂಡ ಸರ್ಕಾರಿ ಭೂಮಿ ಕಬಳಿಕೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ  ಸೃಷ್ಠಿ, ವಂಚನೆ ಮಾಡಿರುವ ಬಗ್ಗೆಯೂ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಕೆ.ಜೆ.ಜಾರ್ಜ್ ಪಾಲುದಾರಿಕೆಯ ಎಂಬೆಸ್ಸಿ ಗಾಲ್ಫ್ ಲಿಂಕ್ ಟೆಕ್‍ಪಾರ್ಕ್ ನಿರ್ಮಾಣದ ಹೆಸರಿನಲ್ಲಿ 850 ಕೋಟಿ ಬೆಲೆಬಾಳುವ 13 ಎಕರೆಯಷ್ಟು ಸರ್ಕಾರಿ ಸ್ವತ್ತನ್ನು ಒತ್ತುವರಿ ಮಾಡಲಾಗಿದೆ. ಆದ್ದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯದುವೀರ್ ತ್ರಿಷಿಕಾ ದಂಪತಿಗೆ ಗಂಡು ಮಗು- ಸಿಹಿ ಹಂಚಿ ಸಂಭ್ರಮಿಸಿದ ಜನರು

ಮೈಸೂರಿನ ಮಹಾರಾಜ ಯದುವೀರ್ ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ...

news

ಜೆಡಿಎಸ್‌ನಿಂದ ಮಿಷನ್ 170, ಬಿಜೆಪಿಯಿಂದ ಮಿಷನ್ 150, ಕಾಂಗ್ರೆಸ್?

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಅಧಿಕಾರದ ಗದ್ದುಗೆ ಹಿಡಿಯುವತ್ತ ರಣತಂತ್ರ ...

news

ಕಳ್ಳನ ಕೈಚಳಕಕ್ಕೆ ದಕ್ಕಿದ್ದು ಲಕ್ಷ ಲಕ್ಷ ರೂಪಾಯಿ!

ಬೆಂಗಳೂರು: ಪೊಲೀಸರು ಎಷ್ಟೇ ಶಿಕ್ಷೆ ಕೊಟ್ಟರು, ದುಡ್ಡಿದ್ದವರು ಎಷ್ಟೇ ಜಾಗೃತೆ ವಹಿಸಿದರು ಕಳ್ಳರು ಮಾತ್ರ ...

news

ಪ್ರವಾಸಕ್ಕೆ ತಂದೆ ಹಣ ನೀಡಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆ

ಕೋಲಾರ: ಪ್ರವಾಸಕ್ಕೆ ತಂದೆ ಹಣ ನೀಡಿಲ್ಲವೆಂದು ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ...