ಉತ್ತರ ಪ್ರದೇಶದ ಗೋರಖ್ಪುರದ ಆಭರಣ ಮಳಿಗೆಯೊಂದರಲ್ಲಿ ಮಹಿಳೆಯೊಬ್ಬಳು ರೂ. 7 ಲಕ್ಷದ ನೆಕ್ಲೇಸ್ ಅನ್ನು ಕದ್ದಿದ್ದಾಳೆ. ಈಕೆ ಆಭರಣವನ್ನು ಕದಿಯುವ ಈ ದೃಶ್ಯ ಆಭರಣ ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ. ಈ ಮಹಿಳೆಯು ಮಾಸ್ಕ್ ಮತ್ತು ಕಪ್ಪುಬಣ್ಣದ ಕೂಲಿಂಗ್ ಗ್ಲಾಸ್ ಧರಿಸಿದ್ದಾಳೆ. ನೆಟ್ಟಿಗರು ಈ ವಿಡಿಯೋ ನೋಡಿ ಬೆಚ್ಚಿಬಿದ್ದಿದ್ದಾರೆ. ಈ ಘಟನೆ ನಡೆದಿದ್ದು ನವೆಂಬರ್ 17ರಂದು. ಬಲದೇವ್ ಪ್ಲಾಝಾದ ಬೇಚೂಲಾಲ್ ಸರಾಫ್ ಪ್ರೈವೇಟ್ ಲಿಮಿಟೆಡ್ ಎಂಬ