ಆರ್ ಎಸ್ ಎಸ್ ಮತ್ತು ಬಿಜೆಪಿ ಅವರು ಮಹಾತ್ಮ ಗಾಂಧಿ ವಿರೋಧಿಗಳಾಗಿದ್ದಾರೆ. ಇದನ್ನ ಬಹಿರಂಗವಾಗಿ ಅವರು ಹೇಳುತ್ತಿರಲಿಲ್ಲ. ಆರ್ ಎಸ್ ಎಸ್ ಕಚೇರಿಗಳಲ್ಲಿ ಚರ್ಚೆ ಮಾಡುವಾಗ ಗೋಡ್ಸೆ ದೇಶಭಕ್ತ ಎಂದು ಹೇಳುತ್ತಿದ್ರು. ಹೀಗಂತ ಕಾಂಗ್ರೆಸ್ ದೂರಿದೆ.ಮಹಾತ್ಮ ಗಾಂಧಿ ದೇಶ ಹಾಳು ಮಾಡಿದ್ರು ಅಂತ ಹೇಳುತ್ತಿದ್ರು. ಆದರೆ ಹೊರಗೆ ಹೇಳುತ್ತಿರಲಿಲ್ಲ. ಟೆರರಿಸ್ಟ್ ಅಟ್ಯಾಕ್ ನಲ್ಲಿ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ದೇಶ ಒಡೆಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ.