ಆರೆಸ್ಸೆಸ್ ಮುಖಂ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತ ಎನ್`ಐಎ ಕೋರ್ಟ್`ಗೆ ಚಾರ್ಜ್ ಸೀಟ್ ಸಲ್ಲಿಸಲಾಗಿದೆ. ಇರ್ಫಾನ್ ಪಾಷಾ, ವಸೀಮ್ ಅಹ್ಮದ್, ಮೊಹ್ಮದ್ ಸಾದಿಕ್, ಮೊಹ್ಮದ್ ಮಜೀಬುಲ್ಲಾ, ಆಸೀಮ್ ಶರಫ್ ವಿರುದ್ಧ ಚಾರ್ಜ್ ಶಿಟ್ ಸಲ್ಲಿಸಲಾಗಿದೆ. ಆರೋಪಿಗಳು ಪಿಎಫ್ಐ ಸಂಘಟನೆಗೆ ಸೇರಿದ್ದವರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ರುದ್ರೇಶ್`ಗೂ ಆರೋಪಿಗಳಿಗೂ ಯಾವುದೇ ವೈಯಕ್ತಿಕ ದ್ವೇಷವಿಲಿಲ್ಲ. ಆರೆಸ್ಸೆಸ್ ಸಮವಸ್ತ್ರದಲ್ಲಿರುವವರನ್ನ ಕೊಂದು ಆ ಸಂಘಟನೆ ಸೇರುವವರಿಗೆ ಭಯ ಹುಟ್ಟಿಸುವುದು ಇವರ ಉದ್ದೇಶವಾಗಿತ್ತು.