ಕೊರೋನಾ ಪತ್ತೆಗೆ ಆರ್ ಟಿಪಿಸಿಆರ್ ಪರೀಕ್ಷೆಯೇ ಅಂತಿಮವಲ್ಲ!

ಬೆಂಗಳೂರು| Krishnaveni K| Last Modified ಶುಕ್ರವಾರ, 9 ಏಪ್ರಿಲ್ 2021 (09:44 IST)
ಬೆಂಗಳೂರು: ಕೊರೋನಾ ಪರೀಕ್ಷೆ ಮಾಡಲು ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡಿದ್ದೀರಾ? ಅದರಲ್ಲಿ ನಿಮಗೆ ನೆಗೆಟಿವ್ ವರದಿ ಬಂದಿದೆ ಎಂದು ಖುಷಿಯಾಗಿದ್ದೀರಾ? ಹಾಗಿದ್ದರೆ ನೀವು ಎಚ್ಚರಿಕೆಯನ್ನು ಓದಲೇ ಬೇಕು.

 

ಕೊರೋನಾ ದೃಢಪಡಿಸಿಕೊಳ್ಳಲು ಆರ್ ಟಿಪಿಸಿಆರ್ ಒಂದೇ ಮಾನದಂಡವಲ್ಲ. ಇದು ಖಚಿತ ಫಲಿತಾಂಶ ಕೊಡುತ್ತದೆ ಎಂದು ನಂಬಲಾದರೂ ಕೆಲವೊಮ್ಮೆ ಇದೂ ಕೂಡಾ ಖಚಿತವಾಗಿ ನಮಗೆ ಸೋಂಕು ತಗುಲಿದೆಯೇ ಎಂದು ಸಾಬೀತುಪಡಿಸಲು ವಿಫಲವಾಗುತ್ತದೆ.
 
ದೇಶದ ಕೆಲವೆಡೆ ಇಂತಹ ಪ್ರಕರಣಗಳು ದಾಖಲಾಗಿದ್ದೂ ಇದೆ. ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೂ ಸಿಟಿ (ಎಆರ್ ಸಿಟಿ) ಪರೀಕ್ಷೆ ಮಾಡಿ ನೋಡಿದಾಗ ಶ್ವಾಸಕೋಶದಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು ಇದೆ ಎಂದು ತಿಳಿದುಬಂದಿದೆ. ಹೀಗಾಗಿ ಸಂಶಯವಿದ್ದರೆ ಮತ್ತೊಂದು ಪರೀಕ್ಷೆ ನಡೆಸುವುದು ಸೂಕ್ತ.
ಇದರಲ್ಲಿ ಇನ್ನಷ್ಟು ಓದಿ :