ಚಿಕ್ಕಬಳ್ಳಾಪುರ : ಭೂಮಿಯೇ ಗಡ ಗಡ ನಡುಗುವ ಹಾಗೆ ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟಿಂಗ್ ಮಾಡಿರುವ ಘಟನೆ ಗೌರಿಬಿದನೂರು ತಾಲೂಕಿನ ಅರ್ಕುಂದ್ ಗ್ರಾಮದ ಬಳಿ ನಡೆದಿದೆ.ಅರ್ಕುಂದ್ ಹಾಗೂ ಕಾಟನಾಗೇನಹಳ್ಳಿ ಗ್ರಾಮದ ಮಧ್ಯೆ ಇರುವ ಬೆಟ್ಟದಲ್ಲಿ ಈ ಬ್ಲಾಸ್ಟಿಂಗ್ ಮಾಡಿದ್ದಾರೆ. ಈ ಗಣಿಗಾರಿಕೆ ಸ್ಪೋಟದ ದೃಶ್ಯವು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.ಈ ಗಣಿಗಾರಿಕೆಯ ಸ್ಪೋಟದ ರಭಸಕ್ಕೆ ಬೃಹತ್ ಕಲ್ಲು ಬಂಡೆಗೆಳು ಆಕಾಶದತ್ತ ಚಿಮ್ಮುವಂತೆ ಕಾಣುತ್ತವೆ. ಸುಮಾರು 500-600 ಮೀ. ದೂರದವರೆಗೂ ಭಾರೀ ಗಾತ್ರದ ಕಲ್ಲುಗಳು