ಬೆಂಗಳೂರು : ಲಾಂಗ್ ತೋರಿಸಿ ಅಂಗಡಿಗಳಲ್ಲಿ ಹಣ ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಕೆ.ಜಿ.ಹಳ್ಳಿಯ ಬರ್ನಲ್ ಸಿದ್ದಿಕಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಸಂತನಗರದಲ್ಲಿ ಹಾಡಹಗಲೇ ಲಾಂಗ್ ಬೀಸಿದ ಅಸಾಮಿ ಅರೆಸ್ಟ್ ಆಗಿದ್ದಾನೆ. ಬರ್ನಲ್ ಸಿದ್ದಿಕಿ ಆಗಾಗ ಲಾಂಗ್ ತೋರಿಸಿ ಏರಿಯಾಗಳಲ್ಲಿ ಹಾವಳಿ ಕೊಡುತ್ತಿದ್ದ. ಕಳೆದ ಭಾನುವಾರ ಸಂಜೆ ವಸಂತನಗರದ 8ನೇ ಕ್ರಾಸ್ಗೆ ಬಂದಿದ್ದ ಸಿದ್ದಿಕಿ ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗಿ ಲಾಂಗ್ ತೋರಿಸಿ ಹಣ ವಸೂಲಿ ಮಾಡಿದ್ದ.