ಶಬರಿಮಲೆ ವಿವಾದ; ಸುಪ್ರೀಂಕೋರ್ಟ್ ಆದೇಶಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದ ಮಲ್ಲಿಕಾರ್ಜುನ್ ಖರ್ಗೆ

ಕಲಬುರಗಿ| pavithra| Last Modified ಶನಿವಾರ, 20 ಅಕ್ಟೋಬರ್ 2018 (16:52 IST)
ಕಲಬುರಗಿ : ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್
ಖರ್ಗೆ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಸಂವಿಧಾನ ಶ್ರೇಷ್ಠ, ಸಂವಿಧಾನ ಹೇಳಿದ ಹಾಗೆ ನಾವು ನಡೆದುಕೊಳ್ಳಬೇಕು. ಈ ವಿಚಾರವಾಗಿ ನಾನು ಮಾಡಲ್ಲ. ಯಾವುದು ಸಮಾಜಕ್ಕೆ ಒಳ್ಳೆಯದಲ್ಲವೋ ಅದನ್ನು ತಿರಸ್ಕರಿಸುವುದನ್ನು ಕಲಿಯಬೇಕು ಎಂದು ಹೇಳಿದ್ದಾರೆ.


ಇನ್ನು ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಧಾರ್ಮಿಕ ವಿಚಾರ ಮಾತನಾಡಲು ನಾನು ಹೋಗಲಾರೆ, ಚುನಾವಣೆಗೆ ಹೋಗುವಾಗ ಇವೆಲ್ಲ ಮಾತುಗಳ ಅಗತ್ಯವಿಲ್ಲ. ನಾವು ಪಕ್ಷದ ಪ್ರಣಾಳಿಕೆ ಮೇಲೆ ಮತ ಕೇಳುತ್ತೇವೆ. ಧರ್ಮದ ಬಗ್ಗೆ ಬೇಕಾದರೆ ಧಾರ್ಮಿಕ ಸಂವಾದಕ್ಕೆ ಕರೆಯಲಿ ಬಂದು ಮಾತನಾಡುವೆ ಎಂದು ಉತ್ತರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :