ಬೆಂಗಳೂರು: ಚುನಾವಣೆಗಾಗಿ ರಾಜಕೀಯ ನಾಯಕರು ಇನ್ನಿಲ್ಲದಂತೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಇದರ ನಡುವೆ ಸದಾನಂದ ಗೌಡರು ಚುನಾವಣೆಗಾಗಿ ಮಾಂಸಾಹಾರವನ್ನೇ ತ್ಯಜಿಸಿದ್ದಾರೆ! ಚುನಾವಣೆ ಪ್ರಚಾರಕ್ಕಾಗಿ ಕಾರ್ಯಕರ್ತರು, ಅಭಿಮಾನಿಗಳ ಮನೆಗೆ ತೆರಳುವಾಗ ಮಾಂಸಾಹಾರದ ಊಟವನ್ನೇ ನೀಡುತ್ತಾರೆ. ಆದರೆ ಈ ರೀತಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಮಾಂಸಾಹಾರವನ್ನೇ ಬಳಸುವುದರಿಂದ ಆರೋಗ್ಯ ಹಾಳಾಗುತ್ತದೆ ಎಂದು ಸದಾನಂದ ಗೌಡರು ಇನ್ನು ಜೀವಮಾನ ಪರ್ಯಂತ ಮಾಂಸಾಹಾರ ತ್ಯಜಿಸಲು ನಿರ್ಧರಿಸಿದ್ದಾರಂತೆ.ಚುನಾವಣೆ ಸಂದರ್ಭದಲ್ಲಿ ಆರೋಗ್ಯ ಕೆಡದಂತೆ ಕಾಪಾಡಲು ಗೌಡರು ಆಹಾರದ ವಿಚಾರದಲ್ಲಿ