ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟುಹೋಗಿದ್ದ ಬಂಡೀಪುರದಲ್ಲಿ ಇಂದಿನಿಂದ ಸಫಾರಿ ಮತ್ತೆ ಆರಂಭವಾಗುತ್ತಿದೆ.ಒಂದು ವಾರಗಳ ಕಾಲ ಬೆಂಕಿಗೆ ಸಿಲುಕಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ 4120 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿದೆ. ಇದರಿಂದಾಗಿ ಬಂಡೀಪುರದಲ್ಲಿ ಅರಣ್ಯ ಸವಾರಿಯನ್ನು ಕೆಲ ದಿನಗಳ ಮಟ್ಟಗೆ ನಿಲ್ಲಿಸಲಾಗಿತ್ತು. ಪ್ರತಿದಿನ ಸಾವಿರಾರು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಉದ್ಯಾನವನ ಬೆಂಕಿ ಅವಘಡ ಸಂಭವಿಸಿದ ನಂತರ ಖಾಲಿ ಖಾಲಿಯಾಗಿತ್ತು. ಒಂದಷ್ಟು ಪ್ರವಾಸಿಗರು ಭೇಟಿ ಕೊಟ್ಟರೂ ಸಫಾರಿ ಇಲ್ಲ ಎಂದು ತಿಳಿದ ಕೂಡಲೆ