ಜೆಡಿಯುನಲ್ಲಿದ್ದ ಬಸವರಾಜ ಬೊಮ್ಮಾಯಿಯನ್ನು ಹಲವು ವಿರೋಧದ ನಡುವೆ ಬಿಜೆಪಿಗೆ ಕರೆತಂದವರು ಯಡಿಯೂರಪ್ಪ. ಕಾಲಾನಂತರದಲ್ಲಿ ಕೆಜೆಪಿಯಲ್ಲಿದ್ದ ಯಡಿಯೂರಪ್ಪ ಅವರನ್ನು ಭಾರೀ ವಿರೋಧದ ನಡುವೆ ಬಿಜೆಪಿಗೆ ಕರೆತರಲು ಮಹತ್ವದ ಪಾತ್ರ ನಿರ್ವಹಿಸಿದವರು ಬೊಮ್ಮಾಯಿ. ಬಸವರಾಜ ಬೊಮ್ಮಾಯಿ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದವರು.ಈ ಬಾರಿಯೂ ಜಲಸಂಪನ್ಮೂಲ ಸಚಿವರಾಗಬೇಕು ಎಂದು ಕನಸು ಕಂಡಿದ್ದರು. ಯಡಿಯೂರಪ್ಪ ಅವರಿಗೂ ಬೊಮ್ಮಾಯಿಗೆ ಜಲಸಂಪನ್ಮೂಲ ಖಾತೆ ಕೊಡಲು ಮನಸ್ಸಿತ್ತು. ಆದರೆ ಪುತ್ರ ವಿಜಯೇಂದ್ರನ ಮಾತು ಕೇಳಿ ಬೊಮ್ಮಾಯಿ ಆಸೆಗೆ ತಕ್ಕಂತೆ ಮಂತ್ರಿ ಸ್ಥಾನ