ಬೆಂಗಳೂರು : ಪ್ರಭುತ್ವ ದಾರಿತಪ್ಪಿದಾಗ ಸರಿಪಡಿಸುವ ಜವಾಬ್ದಾರಿ ಸಂತರದ್ದಾಗಿದೆ. ಸಂತರೆಲ್ಲರೂ ಒಟ್ಟಾಗುತ್ತಿರುವುದು, ಗೋವಿಗಾಗಿ ಸಂತರೆಲ್ಲರೂ ಧ್ವನಿಗೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.