ಪ್ರೀತಿಪಾತ್ರರನ್ನು ಕಳೆದುಕೊಂಡ ಕ್ಷಣವನ್ನು ಎದುರಿಸುವುದು ಬದುಕಿನ ಅತೀ ಕಷ್ಟದ ಕೆಲಸ.. ತಮ್ಮವರನ್ನು ಕಳೆದುಕೊಂಡು ದಿಕ್ಕು ತೋಚದೇ ಕೂರುವ ಕ್ಷಣ ಇಡೀ ಜಗತ್ತೇ ಕತ್ತಲೆನಿಸುತ್ತೆ..ಆದ್ರೆ, ಇದು ಸಾವಿನ ಮನೆಯದ್ದು ಎನ್ನಲಾದ ವೀಡಿಯೋವೊಂದು ವೈರಲ್ ಆಗಿದ್ದು ಬೆಚ್ಚಿ ಬೀಳಿಸುವಂತಿದೆ..ಅಂತ್ಯಕ್ರಿಯೆಗೆ ಆಯೋಜಿಸಿದ ಸಮಾರಂಭದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ವಾಂಟೆಡ್ ಹಾಡಿಗೆ ಯುವತಿಯೊಬ್ಬಳು ಬೆಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಶ್ರದ್ದಾಂಜಲಿ ಸಮಾರಂಭ ಎಂದು ವೇದಿಕೆಯ ಹಿಂಭಾಗದಲ್ಲಿ ಬ್ಯಾನರ್ ಇದೆ. ಮುಂದೆ ಹುಡುಗಿ ಸಖತ್ ಡಾನ್ಸ್ ಮಾಡಿದ್ದಾಳೆ.. ಇದು ಯಾವ ರೀತಿಯ ಶ್ರದ್ಧಾಂಜಲಿ ಸಭೆ ಎಂದು ಜನರು ಬೆಚ್ಚಿ ಬಿದ್ದಿದ್ದಾರೆ. ಹಲವರು ಇದನ್ನು ಅಗೌರವ ಎಂದು ಕರೆದರೆ, ಇತರರು ಹಾಸ್ಯ ಚಟಾಕಿ ಹಾರಿಸಿದ್ದಾರೆ.