ಒಮ್ಮೆ ಹೃದಯ ಬಡಿತ ನಿಂತು ಹೋದರೆ ಬದುಕಿ ಬರುವ ಮಾತೆಲ್ಲಿ, ಆದರೆ ಈ ಮಗು ಸಾವನ್ನೂ ಗೆದ್ದು ಬಂದಿದೆ. ಸತತ 3 ಗಂಟೆಗಳ ಕಾಲ ಹೃದಯ ಬಡಿತ ನಿಂತಿದ್ದರೂ, ವೈದ್ಯರು ಮಗುವನ್ನು ಬದುಕಿಸುವಲ್ಲಿ ಸಫಲರಾಗಿದ್ದಾರೆ. ಇದು ವೈದ್ಯಲೋಕದ ಅಚ್ಚರಿ ಎಂದೇ ಹೇಳಬಹುದು. ಹೋಂ ಡೇ ಕೇರ್ನ ಹೊರಾಂಗಣದಲ್ಲಿ ಆಡುತ್ತಿದ್ದ 20 ತಿಂಗಳ ಮಗು ಅರಿವಿಲ್ಲದೆ ಈಜುಕೊಳಕ್ಕೆ ಬಿದ್ದಿತ್ತು. ಪ್ರಜ್ಞೆ ತಪ್ಪಿತ್ತು, ಅಗ್ನಿಶಾಮಕ ಸಿಬ್ಬಂದಿ ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಮಗು ನಿರ್ಜೀವವಾಗಿತ್ತು.