ಕಲಬುರಗಿ: ಟಿಪ್ಪರ್ ಹರಿಸಿ ಜಿಲ್ಲಾಧಿಕಾರಿಗಳನ್ನೇ ಮರಳು ದಂಧೆಕೋರರು ಕೊಲ್ಲಲೆತ್ನಿಸಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋಶಿ ಬಳಿ ನಡೆದಿದೆ. ಕಾಗಿಣ ನದಿಯಲ್ಲಿ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಿನ್ನೆ ರಾತ್ರಿ ದಾಳಿ ನಡೆಸಿದ್ದ ಕಲಬುರಗಿ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ದಂಧೆ ತಡೆಗೆ ಯತ್ನಿಸಿದ್ದಾರೆ. ಈ ಸಂದರ್ಭ ದಂಧೆಕೋರರು ಡಿಸಿ ಇದ್ದ ಕಾರಿನ ಟಿಪ್ಪರ್ ಹರಿಸಿ ಡಿಸಿಯನ್ನೇ ಕೊಲ್ಲಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.ಪ್ರಕರಣ ಸಂಬಂಧ