ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಬಂದು ಹೆಣ್ಣುಮಕ್ಕಳ ದಂಧೆಗೆ ಇಳಿದ ಸ್ಯಾಂಡಲ್ವುಡ್ ಹೀರೋ ಮಂಜುನಾಥ್ ಅಲಿಯಾಸ್ ಸಂಜು ಈಗ ಅರೆಸ್ಟ್ ಆಗಿದ್ದಾನೆ. ಮಂಜುನಾಥ್ ಹೆಸರಿನ ಹೀರೋ ಲೊಕ್ಯಾಂಟೋ ಆ್ಯಪ್ನ ಹಿಂದೆ ಬಿದ್ದಿದ್ದ. ಈ ಆ್ಯಪ್ ಮೂಲಕ ಸುಲಿಗೆಗೆ ಇಳಿದಿದ್ದ. ಹೆಣ್ಣು ಮಕ್ಕಳ ಫೊಟೋ ಬಳಸಿ ನಕಲಿ ಪ್ರೊಫೈಲ್ ಸೃಷ್ಟಿ ಮಾಡುತ್ತಿದ್ದ. ಈ ದಂಧೆಯಲ್ಲಿ ಮಂಜುನಾಥ್ ಪ್ರಮುಖ ಆರೋಪಿ ಆಗಿದ್ದಾನೆ. ಸದ್ಯ, ಬೆಂಗಳೂರಿನ ಸುದ್ದುಗುಂಟೆಪಾಳ್ಯದ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.