ಬೆಂಗಳೂರು : ಇವಿಎಂ ದುರಪಯೋಗ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಸೋಮವಾರ (ಇಂದು) ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಇವಿಎಂ ಬಳಕೆಯಿಂದ ಪಾರದರ್ಶಕ ಫಲಿತಾಂಶ ಬಂದಿದೆ. ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ, ಚಿಪ್ ಒಮ್ಮೆ ಮಾತ್ರ ಬಳಸಲು ಸಾಧ್ಯ. ಇವಿಎಂ ಸೇಫ್ ಅಲ್ಲವೆಂಬ ಅನುಮಾನ ಪರಿಹಾರಕ್ಕಾಗಿ ವಿವಿ ಪ್ಯಾಟ್ ಬಳಕೆ ಮಾಡಲಾಗಿದೆ. ಇವಿಎಂಗೆ ಇಂಟರ್ ನೆಟ್, ವೈಫೈ, ಬ್ಲೂಟೂತ್ ಕನೆಕ್ಷನ್ ಇಲ್ಲ. ರಿಮೋಟ್ ಬಳಸಿ ಹ್ಯಾಕ್ ಮಾಡಲಾಗಲ್ಲ.