ಎಸ್.ಟಿ.ಸೋಮಶೇಖರ್ ವಿರುದ್ಧ ಕಿಡಿಕಾರಿದ ಸಾ.ರಾ.ಮಹೇಶ್

ಮೈಸೂರು| pavithra| Last Modified ಬುಧವಾರ, 28 ಏಪ್ರಿಲ್ 2021 (12:01 IST)
ಮೈಸೂರು : ಮೈಸೂರು ಜಿಲ್ಲಾಡಳಿತ ಸತ್ತು ಹೋಗಿದೆಯಾ? ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ?  ಎಂದು ಎಸ್.ಟಿ.ಸೋಮಶೇಖರ್ ವಿರುದ್ಧ ಸಾ.ರಾ.ಮಹೇಶ್ ಗರಂ ಆಗಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ 2ನೇ ಅಲೆ ಬರುತ್ತೆಂದು ಹೇಳಿದ್ರು. ಆರೋಗ್ಯ ಸಚಿವರೇ ಹೇಳಿದ್ರು, ಏನ್ಮಾಡಿದ್ರಿ.ಮೈಸೂರಿನಲ್ಲಿ ಏನ್ ಸಿದ್ಧತೆ ಮಾಡಿಕೊಂಡ್ರಿ? ಎಂದು ಶಾಸಕ ಸಾ.ರಾ.ಮಹೇಶ್ ಕೆಂಡಾಮಂಡಲರಾಗಿದ್ದಾರೆ.

ಬಡವರು, ರೈತರು ಸಾಯುತ್ತಿದ್ದಾರೆ. ಬರೀ ಮೀಟಿಂಗ್ ಮಾಡಿದ್ರೆ ಏನೂ ಆಗಲ್ಲ. ಬೆಂಗಳೂರಿನ ಸ್ಥಿತಿ ಮೈಸೂರಿಗೆ ಬರದಂತೆ ಮಾಡಿ ಎಂದು ಎಸ್.ಟಿ.ಸೋಮಶೇಖರ್ ವಿರುದ್ಧ ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :