ಬೆಂಗಳೂರು: ಅನಾರೋಗ್ಯಕ್ಕೊಳಗಾಗಿರುವ ಪತಿ ನಟರಾಜನ್ ಯೋಗ ಕ್ಷೇಮ ವಿಚಾರಿಸಲು ಐದು ದಿನಗಳ ಪರೋಲ್ ಪಡೆದು ಚೆನ್ನೈಗೆ ತೆರಳಿದ್ದ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಇಂದು ಮರಳಿ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ಬಂಧೀಖಾನೆ ಇಲಾಖೆ ಶಶಿಕಲಾಗೆ ಷರತ್ತುಬದ್ಧ ಪರೋಲ್ ನೀಡಿತ್ತು. ಅದರಂತೆ ಶಶಿಕಲಾ ಪತಿ ನಟರಾಜನ್ ಆರೋಗ್ಯ ವಿಚಾರಿಸುವುದರ ಹೊರತಾಗಿ ಯಾವುದೇ ಪಕ್ಷದ ಚಟುವಟಿಕೆ, ಸಭೆ, ಸಮಾಲೋಚನೆ ಮತ್ತು ಮಾಧ್ಯಮಗಳೊಂದಿಗೆ ಮಾತನಾಡುವಂತಿರಲಿಲ್ಲ.ಈ ಐದೂ ದಿನಗಳಲ್ಲಿ ಶಶಿಕಲಾ