ನವದೆಹಲಿ: ಬೆಳಗಾವಿ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಬಂಡಾಯದ ಬಿಸಿ ದೆಹಲಿಗೆ ತಲುಪಿದೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ಸತೀಶ್ ಜಾರಕಿಹೊಳಿ ಇಂದು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ.ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಜತೆಗೆ ಇಂದು ಸತೀಶ್ ಜಾರಕಿಹೊಳಿ ರಾಹುಲ್ ಭೇಟಿ ಮಾಡಲಿದ್ದು, ಬೇಡಿಕೆಗಳ ಪಟ್ಟಿ ಮುಂದಿಡಲಿದ್ದಾರೆ.ಬೆಳಗಾವಿ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಭಿನ್ನಮತ, ಅದರ ಕಾರಣ, ಸಚಿವ ಡಿಕೆ ಶಿವಕುಮಾರ್ ಹಸ್ತಕ್ಷೇಪದ ಬಗ್ಗೆ ದೂರು ನೀಡುವುದು ಮತ್ತು ನಾಯಕ ಸಮುದಾಯದ ಒಬ್ಬರಿಗೆ ಸಚಿವ