ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಮ್ಮಿಶ್ರ ಸರ್ಕಾರದ ನೂತನ ಸಚಿವ ರಮೇಶ ಜಾರಕಿಹೊಳಿ ತಮ್ಮ ಸಹೋದರ ಸತೀಶ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ. ಮಂತ್ರಿ ಸ್ಥಾನ ಸಿಗದಕ್ಕೆ ಮುನಿಸಿಕೊಂಡಿರುವ ಸಹೋದರ ಸತೀಶ್ ಜಾರಕಿಹೊಳಿ ಮನವೊಲಿಸುತ್ತಿರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಒಂದು ವಾರದಲ್ಲಿ ಎಲ್ಲ ಗೊಂದಲಗಳು ಸರಿಯಾಗಲಿವೆ. ಸತೀಶ್ ಜಾರಕಿಹೊಳಿ ಮನವೊಲಿಸಲು ಸಣ್ಣ ಹುಡುಗನಲ್ಲ. ಆತ ಅನುಭವಿ ರಾಜಕಾರಣಿ. ಪಕ್ಷಕ್ಕಾಗಿ ಕೆಲವೊಮ್ಮೆ ತ್ಯಾಗ ಮಾಡಬೇಕಾಗುತ್ತದೆ. ಕಳೆದ ಬಾರಿ ನಾನು