Widgets Magazine

ಶಾಲಾ ವಾಹನದಲ್ಲಿ ಬಾಲಕ ನೇತಾಡಿಕೊಂಡು ಪ್ರಯಾಣಿಸಿದ್ದ ಪ್ರಕರಣ; ಚಾಲಕ ಅರೆಸ್ಟ್

ರಾಯಚೂರು| pavithra| Last Updated: ಶುಕ್ರವಾರ, 29 ನವೆಂಬರ್ 2019 (10:46 IST)
ರಾಯಚೂರು : ಶಾಲಾ ವಾಹನದಲ್ಲಿ  ಬಾಲಕ ನೇತಾಡಿಕೊಂಡು ಪ್ರಯಾಣಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ರಾಮಯ್ಯ ಬಂಧಿತ ಆರೋಪಿ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಶಾಲೆಯೊಂದರ ವಾಹನದಲ್ಲಿ ಚಾಲಕ ರಾಮಯ್ಯ  ಶಾಲಾ ವಿದ್ಯಾರ್ಥಿಯೊಬ್ಬನನ್ನು ವಾಹನದ ಹೊರಗೆ ನೇತಾಡಿಸಿಕೊಂಡು ಪ್ರಯಾಣ ಬೆಳೆಸಿದ್ದಾನೆ. ಈ ಹಿನ್ನಲೆಯಲ್ಲಿ ಬಾಲಕನ ಜೀವದ ಜೊತೆ ಆಟವಾಡಿದ ಚಾಲಕನನ್ನು ಶಾಲಾ ಆಡಳಿತ ಮಂಡಳಿ ವಜಾಗೊಳಿಸಿದೆ.


ಅಲ್ಲದೇ  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನ ವಿರುದ್ದ ಮಾನ್ವಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279, 336 ರಡಿ ಕೇಸ್ ದಾಖಲಾಗಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :