ಬೆಂಗಳೂರು: ಬರೋಬ್ಬರಿ 2 ವರ್ಷಗಳ ಬಳಿಕ ಪ್ರಾಥಮಿಕ ಶಾಲೆ ಆರಂಭವಾಗ್ತಿವೆ. ಇಷ್ಟು ದಿನ ಮನೆಯಲ್ಲಿದ್ದ 6ರಿಂದ 8ನೇ ತರಗತಿ ಮಕ್ಕಳು ಕೊನೆಗೂ ಶಾಲೆಗೆ ಹೋಗೋ ಭಾಗ್ಯ ಒದಗಿದೆ. ಶಾಲೆ ಶುರು ಮಾಡಲು ನಿರ್ಧಾರ ತೆಗೆದ್ಕೊಂಡಿರೊ ಇಲಾಖೆ ಮಾರ್ಗಸೂಚಿ ರೆಡಿಮಾಡಿದೆ. ಇತ್ತ ಶಾಲೆಗಳು ಸಹ ರೆಡಿ ಸ್ಟಡಿ ಗೋ ಅಂತಾ ಪುನರಾರಂಭಗೊಳ್ಳಲು ಭರ್ಜರಿ ತಯಾರಿ ನಡೆಸುತ್ತಿವೆ. ಬೆಳಗೆದ್ದು, ತಯಾರಾಗಿ, ಬ್ಯಾಗ್ ಹೆಗಲಿಗೆ ಏರಿಸ್ಕೊಂಡು ಶಾಲೆ ಕಡೆ ಮುಖ ಮಾಡ್ತಿದ್ದ ಮಕ್ಕಳ ದಿನಚರಿ ಬದಲಾಯಿಸಿದ್ದು ಕೊರೊನಾ. ಈ ಮಹಾಮಾರಿ ದೆಸೆಯಿಂದ ಮಕ್ಕಳು ಶಾಲೆ ಕಡೆ ಮುಖ ಮಾಡದೆ ಎರಡು ವರ್ಷಗಳೇ ಆಗುತ್ತಿವೆ. ಸದ್ಯ 9 ರಿಂದ 12ನೇ ತರಗತಿಯನ್ನ ಯಶಸ್ವಿಯಾಗಿ ಆರಂಭಿಸಿರೊ ಇಲಾಖೆ, ಇದೀಗ 6 ರಿಂದ 8ನೇ ತರಗತಿ ಮಕ್ಕಳ ಮನೆವಾಸ ಅಂತ್ಯಗೊಳಿಸಿದೆ. ಸರ್ಕಾರ ನಿರ್ಧರಿಸಿರುವಂತೆ ನಾಳೆಯಿಂದ ಪ್ರಾಥಮಿಕ ಶಾಲೆಗಳು ಮಕ್ಕಳ ಆಹ್ವಾನಕ್ಕೆ ಕಾತೊರೆಯುತ್ತಿವೆ. ದಿನ ಬಿಟ್ಟು ದಿನ ಬ್ಯಾಚ್ ಗಳಲ್ಲಿ ತರಗತಿ ನಡೆಸಲು ಸರ್ಕಾರ ಸೂಚನೆ ಹೊರಡಿಸಿದ್ದು, ಸೋಂಕಿನ ಹೊಡೆತ ಶೇ 2ಕ್ಕಿಂತ ಕಡಿಮೆ ಇರೊ ಜಿಲ್ಲೆಗಳಲ್ಲಿ ಮಾತ್ರ ಶಾಲಾರಂಭವಾಗಲಿದೆ. ಸೋಮವಾರ ದಿಂದ ಶುಕ್ರವಾರ ಮಾತ್ರ ತರಗತಿ ನಡೆಯಲಿದ್ದು, ಶನಿವಾರ, ಭಾನುವಾರ ಎರಡು ದಿನ ಸ್ಯಾನಿಟೈಸ್ ಮಾಡಲು ತೀರ್ಮಾನಿಸಲಾಗಿದೆ. ಇನ್ನು 6 ರಿಂದ 7ನೇ ತರಗತಿ ಮಕ್ಕಳಿಗೆ ಬೆಳಿಗ್ಗೆ 10: 30 ರಿಂದ ಮಧ್ಯಾಹ್ನ 1:30 ರವರೆಗೆ ತರಗತಿ ನಡೆಸಲಿದ್ದು, 8 ನೇ ತರಗತಿ ಮಕ್ಕಳಿಗೆ ಮಧ್