ಬೆಂಗಳೂರು: ಕೊರೋನಾ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಶಾಲೆ ಆರಂಭಿಸಲು ಸಲಹೆ ನೀಡಿತ್ತು. ಹಂತ ಹಂತವಾಗಿ ಸಮ-ಬೆಸ ಆಧಾರದಲ್ಲಿ ಶಾಲೆ ಆರಂಭಿಸಬಹುದು ಎಂದು ತಜ್ಞರ ಸಮಿತಿ ಸಲಹೆ ನೀಡಿತ್ತು. ಈ ವಿಚಾರ ಬಹಿರಂಗವಾಗುತ್ತಿದ್ದಂತೇ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು.ಇದೀಗ ಸ್ವತಃ ಸಿಎಂ ಯಡಿಯೂರಪ್ಪ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಜ್ಞರು ಸಲಹೆ ನೀಡಿದರೂ, ಸದ್ಯಕ್ಕೆ ಶಾಲೆ ಆರಂಭಿಸಲ್ಲ ಎಂದಿದ್ದಾರೆ.