ಡೆಂಗ್ಯೂ ಜ್ವರಕ್ಕೆ ಶಾಲಾ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಆಕೆಯ ಸಹೋದರಿ ಅಸ್ವಸ್ಥಗೊಂಡಿರೋ ಘಟನೆ ನಡೆದಿದೆ.ಮಂಡ್ಯ ಜಿಲ್ಲೆಯ ಅಗಸರಹಳ್ಳಿ ಗ್ರಾಮದ ರವಿಕುಮಾರ್ -ರಾಣಿ ದಂಪತಿಯ ಪುತ್ರಿ ಕೆ.ಆರ್.ಪೇಟೆ ಪಟ್ಟಣದ ಪ್ರಿಯದರ್ಶಿನಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೇಮಾವತಿ(7) ಮೃತ ದುರ್ದೈವಿಯಾಗಿದ್ದಾರೆ.ಈಕೆಯ ಸಹೋದರಿ ಪ್ರೇರಣ(5) ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜೆಎಸ್ ಎಸ್ ಆಸ್ಪತ್ರೆಯಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹೇಮಾವತಿ ಮತ್ತು ಪ್ರೇರಣಾ ಸಹೋದರಿಯರು ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಅಪೋಲೋ