ಬಿಸಿಲಿನಲ್ಲಿ ಪ್ರಯಾಣಿಸುವ ವಾಹನ ಸವಾರರೇ ಎಚ್ಚರ ಎಚ್ಚರ..! 43 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಕ್ಕೆ ಹೊತ್ತಿ ಉರಿದಿದೆ ಸ್ಕಾರ್ಫಿಯೋ ಕಾರ್. ಬಿಸಿಲಿನ ತಾಪಕ್ಕೆ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರ್ ಹೊತ್ತಿ ಉರಿದ ಘಟನೆ ನಡೆದಿದೆ. ಔರಾದ್ ನಿಂದ ಬೀದರ್ ಕಡೆ ಹೊರಟಾಗ ಘಟನೆ ಸಂಭವಿಸಿದೆ.ಬೆಂಕಿ ಹೊತ್ತಿಕೊಳ್ಳುತಿದ್ದಂತೆ ಕಾರ್ ಬಿಟ್ಟು ಓಡಿಹೋದ ಚಾಲಕ ಮತ್ತು ಪ್ರಯಾಣಿಕರು ಪ್ರಾಣಾಪಾಯರಿಂದ ಪಾರಾಗಿದ್ದಾರೆ. ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ