ಧಾರವಾಡ : ಇಲ್ಲಿನ ಖಾಸಗಿ ಶಾಲೆ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎಸ್ಡಿಎಮ್ ಕಾಲೇಜಿನ ವಿದ್ಯಾರ್ಥಿನಿಯಿಂದ ಸೋಂಕು ಹರಡಿದೆ. ಈ ಮೊದಲು ಹುಬ್ಬಳ್ಳಿಯ ಎಸ್ಡಿಎಮ್ ಕಾಲೇಜಿನಲ್ಲಿ ಕೊರೊನಾ ಸೋಂಕು ಕಂಡುಬಂದಿತ್ತು. ಬಳಿಕ, ಇದೀಗ ವಿದ್ಯಾರ್ಥಿನಿಯಿಂದ ಸಹೋದರನಿಗೆ ಕೊರೊನಾ ಹರಡಿದೆ. ಎಸ್ಡಿಎಮ್ ಕಾಲೇಜಿನಿಂದ ಖಾಸಗಿ ಶಾಲೆಗೆ ಕೊವಿಡ್19 ಸೋಂಕು ಹರಡಿದಂತಾಗಿದೆ. ಹುಬ್ಬಳ್ಳಿಯ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಓದುತ್ತಿರುವ ಬಗ್ಗೆ ತಿಳಿದುಬಂದಿದೆ. ಆದರ್ಶನಗರದ ಶಾಲೆಯಲ್ಲಿ ವಿದ್ಯಾರ್ಥಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವುದು ತಿಳಿದುಬಂದಿದೆ.