ಮೀನು ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.ಬೆಂಗಳೂರಿನಾದ್ಯಂತ 100 ಸ್ಥಳಗಳಲ್ಲಿ ಫಿಶ್ ಕ್ಯಾಂಟೀನ್ ಆರಂಭಿಸಲು ಮೀನುಗಾರಿಕೆ ಇಲಾಖೆ ನಿರ್ಧರಿಸಿದೆ.ಬೆಂಗಳೂರಿನ ಪ್ರತಿ ವಾರ್ಡ್ನಲ್ಲಿ ಈ ಫೀಶ್ ಕ್ಯಾಂಟೀನ್ ಪ್ರಾರಂಭಿಸಲು ಸರ್ಕಾರ ನಿರ್ಧರಿಸಲಾಗಿದೆ.ಆರಂಭಿಕವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಮೀನುಗಳನ್ನು ಮಾರಾಟ ಮಾಡುವುದರ ಜೊತೆಗೆ ಊಟವನ್ನು ಒದಗಿಸುವ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ.ನಗರದ ಎಂಟು ಝೋನ್ ಗಳಲ್ಲಿ 100 ಫೀಶ್ ಕ್ಯಾಂಟೀನ್ ತೆರೆಯಲಿವೆ.ಇದಕ್ಕಾಗಿ ಮೀನುಗಾರಿಕೆ ಇಲಾಖೆಯಿಂದ ಸಿದ್ದತೆ ನಡೆದಿದೆ.ಈ ಕ್ಯಾಂಟೀನ್ಗಳಲ್ಲಿ ಸಂಪೂರ್ಣ ಮೀನಿನ ಊಟ ಸಿಗಲಿದೆ,