ಕಾರಾವಾರದಲ್ಲಿ ಕಡಲ ಅಬ್ಬರ

ಉತ್ತರ ಕನ್ನಡ| pavithra| Last Modified ಮಂಗಳವಾರ, 5 ಡಿಸೆಂಬರ್ 2017 (08:20 IST)
ಉತ್ತರ ಕನ್ನಡ: ಕಡಲ ಅಬ್ಬರಕ್ಕೆ ಅಲೆಗಳು ಅಪ್ಪಳಿಸಿ

ಕಡಲ ತೀರವನ್ನು ನೀರು ಅವರಿಸಿಕೊಂಡ ಘಟನೆಯೊಂದು ಉತ್ತರಕನ್ನಡ ಜಿಲ್ಲೆಯ ಕಾರಾವಾರದಲ್ಲಿ
ನಡೆದಿದೆ.


ಸಮುದ್ರದಲ್ಲಿ ಎಂದೂ ಕಾಣದ ಅಲೆಗಳು ನಿನ್ನೆ ತಡರಾತ್ರಿಯಲ್ಲಿ ಕಾರಾವಾರದ ಕಡಲ ತೀರದಲ್ಲಿ ಅಬ್ಬರಿಸಿದೆ. ಕಡಲ ಅಬ್ಬರಕ್ಕೆ ಇಡೀ ಕಡಲ ತೀರವೇ ನೀರಿನಿಂದ ಆವರಿಸಿಕೊಂಡಿದೆ.


ಸಮುದ್ರದಲ್ಲಿ ಕಂಡುಬಂದ ಇಂತಹ ಆತಂಕಕಾರಿ ಘಟನೆಯಿಂದ ಸಮೀಪ ವಾಸಿಸುತ್ತಿದ್ದ ಜನರು ಭಯಭೀತರಾಗಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಧಿಕಾರಿ ನಕುಲ್ ಆದೇಶಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :